ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆಗಳು
1. ದಿನಾಂಕ: 03-06-2022ರಂದು (ಶುಕ್ರವಾರ) 2022ರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ-8 ನೇ ತರಗತಿ) ನೇಮಕಾತಿ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2 ರ ಕೀ ಉತ್ತರಗಳನ್ನು ಇಲಾಖಾ ವೆಬ್‌ಸೈಟ್ http://schooleducation.kar.nic.in ನಲ್ಲಿ ಪ್ರಕಟಿಸಿದೆ.
2. "GPTR-2022 Online objection form for the Key Answers" ಮಾಡುವುದರ ಮೂಲಕ ಅಭ್ಯರ್ಥಿಯು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ, ಲಾಗಿನ್ ಆಗುವುದು.
3. ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ:03-06-2022 ರಿಂದ 10-06-2022 ರವರೆಗೆ ಅವಕಾಶ ಕಲ್ಪಿಸಿದೆ. ಕೊನೆಯ ಅವಕಾಶವಿರುವುದಿಲ್ಲ. ದಿನಾಂಕದ ನಂತರ ಆಕ್ಷೇಪಣೆಗಳನ್ನು ಸಲ್ಲಿಸಲು
4. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಮಾತ್ರವೇ ಆಕ್ಷೇಪಣೆಗಳನ್ನು ಸಲ್ಲಿಸುವುದು. ಆಫ್‌ಲೈನ್ ಮೂಲಕ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ.
5. ಅಭ್ಯರ್ಥಿಗಳು ತಮ್ಮ ಬಳಿಯಿರುವ ಓ.ಎಂ.ಆರ್ (ಕಾರ್ಬನ್) ಪ್ರತಿಯೊಂದಿಗೆ ಕೀ ಉತ್ತರಗಳನ್ನು ತಾಳೆ ನೋಡಿ, ಆಕ್ಷೇಪಣೆಗಳಿದ್ದಲ್ಲಿ ನಿಗದಿತ ಆನ್‌ಲೈನ್ ನಮೂನೆಯಲ್ಲಿ ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬೇಕು.
6. ಜರ್ನಲ್, ನಿಯತಕಾಲಿಕೆ, ವೈಯಕ್ತಿಕ ಪ್ರಕಟಣೆಗಳು, ಗೈಡ್ಸ್ ಹಾಗೂ ಅಂತರ್ಜಾಲ ಮೂಲಗಳು (ವಿಕಿಪೀಡಿಯ, ಗೂಗಲ್ ಇತರೆ) ಹಾಗೂ ಪತ್ರಿಕಾ ಲೇಖನಗಳು ಇವುಗಳನ್ನು ಪೂರಕ ದಾಖಲೆಗಳೆಂದು ಪರಿಗಣಿಸಲಾಗುವುದಿಲ್ಲ. ಸಲ್ಲಿಸಿದ ದಾಖಲೆಗಳಲ್ಲಿ ಸ್ವಷ್ಟತೆ ಇಲ್ಲದಿದ್ದಲ್ಲಿ ಪರಿಗಣಿಸಲಾಗುವುದಿಲ್ಲ.
7. ಅಭ್ಯರ್ಥಿಯು ಸಲ್ಲಿಸುವ ಪ್ರತಿ ಆಕ್ಷೇಪಣೆಗೆ ಪೂರಕ ದಾಖಲೆಗಳೊಂದಿಗೆ ರೂ.50/-ಸಂಸ್ಕರಣಾ ಶುಲ್ಕವಾಗಿ ಪಾವತಿಸುವುದು ಕಡ್ಡಾಯ. ನಿಗದಿತ ಶುಲ್ಕ ಮತ್ತು ಸೂಕ್ತ ದಾಖಲೆಯನ್ನು ಸಲ್ಲಿಸಿದ್ದಲ್ಲಿ ಮಾತ್ರ ಆಕ್ಷೇಪಣೆಯನ್ನು ಸ್ವೀಕರಿಸಲಾಗುವುದು. ಅಭ್ಯರ್ಥಿಯು ಸಲ್ಲಿಸಿದ ಆಕ್ಷೇಪಣೆಯನ್ನು ಪರಿಗಣಿಸಿದಲ್ಲಿ ಮಾತ್ರ ಈ ಸಂಸ್ಕರಣಾ ಶುಲ್ಕವನ್ನು ಅಭ್ಯರ್ಥಿಗಳಿಗೆ ಹಿಂದಿರುಗಿಸಲಾಗುವುದು. ಪೂರಕ ದಾಖಲೆಗಳಿಲ್ಲದಿದ್ದಲ್ಲಿ ಆಕ್ಷೇಪಣೆಯನ್ನು ತಿರಸ್ಕರಿಸಲಾಗುವುದು ಹಾಗೂ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
8. ಪ್ರತಿ ಆಕ್ಷೇಪಣೆಗೆ ರೂ.50/- ಸಂಸ್ಕರಣಾ ಶುಲ್ಕವನ್ನು “ONLINE” ಮೂಲಕ ಅಂದರೆ INTERNET BANKING / CREDIT CARD /DEBIT CARD/UPI ಅಥವಾ ಬ್ಯಾಂಕ್ ಚಲನ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕಿನಲ್ಲಿ ಮಾತ್ರ ಚಲನ್ ಮೂಲಕ ಶುಲ್ಕ ಪಾವತಿಸುವುದು) ಮೂಲಕವೇ ಪಾವತಿಸತಕ್ಕದ್ದು. ಇನ್ಯಾವುದೇ ರೂಪದಲ್ಲಿ ಸಂಸ್ಕರಣಾ ಶುಲ್ಕವನ್ನು ಪಾವತಿಸಲು ಅವಕಾಶವಿರುವುದಿಲ್ಲ.
No comments:
Post a Comment