🏀 ಅಭ್ಯರ್ಥಿಗಳ ಆಯ್ಕೆಗೆ ಸಾಮಾನ್ಯ ಅರ್ಹತೆ:
👉 1. ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರತಕ್ಕದ್ದು.
👉 2. UPSC ಮುಖ್ಯ ಪರೀಕ್ಷೆಯ ತರಬೇತಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳಿಗೆ ರೂ. 8.00 ಲಕ್ಷಗಳ ವಾರ್ಷಿಕ ಆದಾಯ ಹೊಂದಿರಬೇಕು. UPSC prilims ಮತ್ತು ಕೆ.ಪಿ.ಎಸ್.ಸಿ, ಆರ್.ಆರ್.ಬಿ, ಎಸ್.ಎಸ್.ಸಿ, ಬ್ಯಾಂಕಿಂಗ್, ಗ್ರೂಪ್-ಸಿ ಮೊದಲಾದ ತರಬೇತಿಗಳಿಗೆ ವಾರ್ಷಿಕ ಆದಾಯ ರೂ. 5.00 ಲಕ್ಷದೊಳಗಿರತಕ್ಕದ್ದು.
👉 ಅಭ್ಯರ್ಥಿಗಳ ಆಯ್ಕೆ:
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ, ನಾಲ್ಕು, ಇಲಾಖೆಯ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಅರ್ಜಿ ಆಹ್ವಾನಿಸುವುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು TCS ಸಂಸ್ಥೆಯ ಸಹಯೋಗದೊಂದಿಗೆ ಆನ್-ಲೈನ್ ಮೂಲಕ ನಡೆಸುವುದು, ಒಂದು ವೇಳೆ TCS ಸಂಸ್ಥೆಯಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ವೆಚ್ಚ ಹೆಚ್ಚಾದಲ್ಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸಾಮಾನ್ಯ ಪುವೇಶ ಪರೀಕ್ಷೆ ನಡೆಸುವುದು. ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಪರೀಕ್ಷಾ ಪೂರ್ವ ಕಾರ್ಯನೀತಿ ಅನುಸಾರ ತರಬೇತಿ ಸಂಸ್ಥೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದು. ನ್ಯಾಯಾಂಗ ಸೇವೆ ಮತ್ತು ಗಗನಸಖಿ ತರಬೇತಿಗಳಿಗೆ ಅಭ್ಯರ್ಥಿಗಳನ್ನು ನಿಗಧಿತ ಶೈಕ್ಷಣಿಕ ಅರ್ಹತೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
No comments:
Post a Comment