ಅಧಿಸೂಚನೆ.
ಸರ್ಕಾರದ ಆದೇಶ ಸಂಖ್ಯೆ:ಮಮಇ/303/ಐಸಿಡಿ/2017/ದಿನಾಂಕ:23.09.2017, ಸೇರ್ಪಡೆ ಆದೇಶ ದಿನಾಂಕ:01.12.2017, ತಿದ್ದುಪಡಿ ಆದೇಶ ದಿನಾಂಕ:19.01.2019, ತಿದ್ದುಪಡಿ ಆದೇಶ ದಿನಾಂಕ:01.06.2021 ಹಾಗೂ ತಿದ್ದುಪಡಿ ಆದೇಶ ದಿನಾಂಕ:26.05.2022 ಗಳ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ನೇಮಕಾತಿ ಮಾರ್ಗಸೂಚಿಗಳಂತೆ ಕೊಪ್ಪಳ ಜಿಲ್ಲೆಯ 5 ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ 12 ಅಂಗನವಾಡಿ ಕಾರ್ಯಕರ್ತೆ ಮತ್ತು 60-ಆಂಗನವಾಡಿ ಸಹಾಯಕಿಯರ ಗೌರವಧನ ಸೇವೆಯ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ (ವೆಬ್‌ಸೈಟ್ ವಿಳಾಸ: www.anganwadirecruit.kar.nic.in) ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಅರ್ಹ ಮಹಿಳಾ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 25.08.2022 ಆಗಿದ್ದು,ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:23.09.2022 ರ ಸಾಯಂಕಾಲ 5:30ರ ಒಳಗಾಗಿ ಸಲ್ಲಿಸಬಹುದಾಗಿದೆ.
ಸೂಚನೆಗಳು/ನಿಭಂದನೆಗಳು
1. ವಯೋಮಿತಿ ಕನಿಷ್ಟ 18 ರಿಂದ 35 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ (ಕಾರ್ಯಕರ್ತೆ ಹುದ್ದೆಗೆ) ಇರುತ್ತದೆ.
2. ವಿಧ್ಯಾರ್ಹತೆ:-ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್.ಎಸ್.ಎಲ್.ಸಿ (ಕರ್ನಾಟಕ ರಾಜ್ಯ ಪ್ರೌಡ ಶಿಕ್ಷಣ ಮಂಡಳಿಯಿಂದ) ತೇರ್ಗಡೆ ಹೊಂದಿರಬೇಕು
3. ಸಹಾಯಕಿ ಹುದ್ದೆಗೆ ಕನಿಷ್ಟ 4 ರಿಂದ 9ನೇ ತರಗತಿ ತೇರ್ಗಡೆ ಹೊಂದಿರಬೇಕು.
4. ಅಂಗನವಾಡಿ ಕಾರ್ಯಕರ್ತ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿಗಳನ್ನು ಆನ್‌ಲೈನ್ (www.anganwadirecruit.kar.nic.in) ಮೂಲಕವೇ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಅಂಚೆ ಅಥವಾ ಇತರೆ ಯಾವುದೇ ಮೂಲದಿಂದ ಸಲ್ಲಿಸಲು ಅವಕಾಶವಿರುವುದಿಲ್ಲ. ಅಂತಹ ಅರ್ಜಿಗಳು ಸ್ವೀಕೃತವಾದಲ್ಲಿ ಅವುಗಳನ್ನು ಪರಿಗಣಿಸಲಾಗುವುದಿಲ್ಲ.
5. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪೂರ್ವದಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿತ ಕೆಳಗಿನ ನೇಮಕಾತಿಯ ಮಾರ್ಗಸೂಚಿ ನಿಬಂಧನೆಗಳನ್ನು ಸ್ಪಷ್ಟವಾಗಿ ಓದಿಕೊಂಡು ನೀಡಲಾಗಿರುವ ಸೂಚನೆಯಂತೆ ಅರ್ಜಿಗಳನ್ನು ಭರ್ತಿ ಮಾಡಿ ಅವಶ್ಯಕ ಮೂಲ ದಾಖಲೆಗಳನ್ನು ನಿಖರವಾಗಿ ಕಾಣಿಸುವಂತೆ ಸ್ಕ್ಯಾನ್ ಮಾಡಿ ಅಪ್‌ಲೋಡ ಮಾಡಿ ಅರ್ಜಿ ಸಲ್ಲಿಸುವುದು,
6. ಆನ್ ಲೈನ್ ಮೂಲಕವೇ ಅವಶ್ಯಕ ದಾಖಲಾತಿಗಳನ್ನು ಸಲ್ಲಿಸುವದು, ದಾಖಲಾತಿಗಳನ್ನು ಪರಿಗಣಿಸುವುದಿಲ್ಲ. ತದನಂತರ ಸಲ್ಲಿಸುವ
7. ಚುನಾಯಿತ ಜನ ಪ್ರತಿನಿದಿಗಳಾಗಿದ್ದಲ್ಲಿ ಕಾರ್ಯಕರ್ತೆ/ ಸಹಾಯಕಿ ಹುದ್ದೆಗೆ ಆಯ್ಕೆಯಾದಲ್ಲಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಿರುತ್ತದೆ.
8. ಶೇಕಡ 25ಕಿಂತ ಹೆಚ್ಚು ಅಲ್ಪಸಂಖ್ಯಾತ (ಮುಸ್ಲಿಂಮರು, ಕ್ರಿಸ್ಟಿಯನ್ನರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಸಿಕ್ಕರು) ಜನಸಂಖ್ಯೆ ಇರುವ ಪ್ರದೇಶದ ಅಂಗನವಾಡಿ ಕೇಂದ್ರಗಳಲ್ಲಿ ಕನ್ನಡ ಭಾಷೆಯೊಂದಿಗೆ ಆಯಾ ಅಲ್ಪಸಂಖ್ಯಾತ ಸಮುದಾಯದ ಪರಿಗಣಿಸಲಾಗುವುದು. ಬಲ್ಲವರನ್ನು. ಕಾರ್ಯಕರ್ತೆ/ಸಹಾಯಕಿಯ ಹುದ್ದೆಗೆ
9. ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾದ ಕಾರ್ಯಕರ್ತೆ/ಸಹಾಯಕಿಯ ಹುದ್ದೆಗಳಲ್ಲಿ ಅಗತ್ಯವೆನಿಸಿದ್ದಲ್ಲಿ ಕೆಲವು ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆಯಿಂದ ಕೈಬಿಡುವ ಅಧಿಕಾರವನ್ನು ಜಿಲ್ಲಾ ಆಯ್ಕೆ ಸಮಿತಿಯು ಕಾಯ್ದಿರಿಸಿಕೊಂಡಿರುತ್ತದೆ.
-ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು:
1. ಅರ್ಜಿ ನಿಗಧಿತ ನಮೂನೆಯಲ್ಲಿ ಆನ್‌ಲೈನ್ ಮೂಲಕ
2. ಜನನ ಪ್ರಮಾಣ ಪತ್ರ/ಜನ್ಮ ದಿನಾಂಕ ಇರುವ ಶಾಲಾ ದಾಖಲಾತಿ/ಎಸ್.ಎಸ್.ಎಲ್.ಸಿ ಅಂಕಪಟ್ಟಿ,
3, ತಹಶಿಲ್ದಾರರು/ಉಪತಹಶಿಲ್ದಾರರಿಂದ ಪಡೆದ 3 ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ
4. ವಿಧ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ (ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರು 10ನೇ ತರಗತಿಯ ಅಂಕಪಟ್ಟಿಯನ್ನು ಲಗತ್ತಿಸುವುದು.
5. ವಿಧ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ (ಸಹಾಯಕಿ ಹುದ್ದೆಗೆ 9ನೇ ತರಗತಿಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರು 9ನೇ ತರಗತಿಯ ಅಂಕಪಟ್ಟಿಯನ್ನು ಲಗತ್ತಿಸುವುದು.)
6. ಮೀಸಲಾತಿ ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ
7. ವಿಧವಾ ಅಭ್ಯರ್ಥಿಯಾದಲ್ಲಿ ಪತಿಯ ಮರಣ ಪ್ರಮಾಣ ಪತ್ರ (ವಿಧವಾ ವೇತನದ ದೃಢೀಕರಣವನ್ನು ಪರಿಗಣಿಸುವುದಿಲ್ಲ.)
8. ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿ ಎಂದು ಉಪ ವಿಭಾಗಾಧಿಕಾಗಳಿಂದ ಪಡೆದ ಪ್ರಮಾಣ ಪತ್ರ,
9, ಅಂಗವಿಕಲತೆ ಪ್ರಮಾಣ ಪತ್ರ, ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾತ್ರ.(ಅಂಗವಿಕಲರ ವೇತನದ ದೃಢೀಕರಣವನ್ನು ಪರಿಗಣಿಸುವುದಿಲ್ಲ.)
10. ವಿಚ್ಚೇದನ ಪ್ರಮಾಣ ಪತ್ರ (ನ್ಯಾಯಾಲಯದಿಂದ ಪಡೆದಿರಬೇಕು)
II, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಯಲ್ಪಟ್ಟ ಮಾಜಿ ದೇವದಾಸಿಯರ ಸಮೀಕ್ಷೆಯ ಪಟ್ಟಿಯಲ್ಲಿರುವ ಮಾಜಿ ದೇವದಾಸಿಯರ ಮಗಳು ಎಂಬುವುದರ ಬಗ್ಗೆ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳಿಂದ ಪ್ರಮಾಣ ಪತ್ರ
12. ಪರಿತ್ಯಕ್ಕೆ ಎಂಬ ಬಗ್ಗೆ ಗ್ರಾಮ ಪಂಚಾಯತಿಯಿಂದ ಪಡೆದ ಪ್ರಮಾಣ ಪತ್ರ
13. ಇಲಾಖೆಯ ಸುಧಾರಣ ಸಂಸ್ಥೆ/ರಾಜ್ಯ ಮಹಿಳಾ ನಿಲಯಗಳ ನಿವಾಸಿ ಎಂಬ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆಯ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ, 14. ಯೋಜನಾ ನಿರಾಶ್ರಿತರಾದಲ್ಲಿ ತಹಶಿಲ್ದಾರರಿಂದ ಪಡೆದ ಪ್ರಮಾಣ ಪತ್ರ,
No comments:
Post a Comment