Topic :KPSC Notification
Section : All Section
Location : All over World
Date of
Publication : 01/03/2024
Scaned copy :Yes
Number of
pages :01
Compassable
text :No
password
protected :No
Link Download:Available
Copy Text :Yes
Printin Enable :Yes
Quality of topic:High
Topic size
reduced :No
Cost of Topic :No
Save Tree and Save Soil
ಅಧಿಸೂಚನೆ
ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ಸಾಮಾನ್ಯ ಸೇವೆಗಳು (ಭೂಮಾಪನ, ಕಂದಾಯ ವ್ಯವಸ್ಥೆ, ಶಾಖೆ) (ನೇಮಕಾತಿ) ನಿಯಮಗಳು 1990 ಹಾಗೂ ತಿದ್ದುಪಡಿ ನಿಯಮ 2009 ಮತ್ತು 2013 ಹಾಗೂ ಕರ್ನಾಟಕ ನಾಗರೀಕ ಸೇವೆಗಳು (ನೇರನೇಮಕಾತಿ) (ಸಾಮಾನ) ನಿಯಮಗಳು 2021 ಹಾಗೂ ತಿದ್ದುಪಡಿ ನಿಯಮ 2022ರನ್ವಯ ಮತ್ತು ಸರ್ಕಾರವು ಕಾಲಕಾಲಕ್ಕೆ ನಿಗದಿಪಡಿಸಿ ಹೊರಡಿಸುವ ಮೀಸಲಾತಿ ನಿಯಮಗಳನ್ವಯ ಈ ಕೆಳಕಂಡ ಉಳಿಕೆ ಮೂಲ ವೃಂದದ ಗ್ರೂಪ್ 'ಸಿ' ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ On-line ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
2. ಶೈಕ್ಷಣಿಕ ವಿದ್ಯಾರ್ಹತೆ:-
a. ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಇ. (ಸಿವಿಲ್)/ ಅಥವಾ ಬಿ.ಟೆಕ್. (ಸಿವಿಲ್)/ಅಥವಾ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾದಲ್ಲಿ ಉತ್ತೀರ್ಣ ರಾಗಿರಬೇಕು.
ಅಥವಾ
b. ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ) ಅಥವಾ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಜರುಗಿಸುವ 12ನೇ ತರಗತಿ (ಸಿ.ಬಿ.ಎಸ್.ಇ. ಅಥವಾ ಐ.ಸಿ.ಎಸ್.ಇ) ಇವುಗಳಲ್ಲಿ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ ಶೇಕಡ 60ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
ಅಥವಾ
C. ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ "ಲ್ಯಾಂಡ್ ಅಂಡ್ ಸಿಟಿ ಸರ್ವೆ"ಯ ಪದವಿ ಪೂರ್ವ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು.
ಅಥವಾ
d. ಕರ್ನಾಟಕ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ "ಐ.ಟಿ.ಐ. ಇನ್ ಸರ್ವೆ ಟ್ರೇಡ್" ನಲ್ಲಿ ಉತ್ತೀರ್ಣರಾಗಿರಬೇಕು.
3. ವಿಶೇಷ ಸೂಚನೆ:-
ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲಾ.. ವಿವರಗಳನ್ನು ಓದಿ ಅರ್ಥೈಸಿಕೊಂಡು ಆನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭರ್ತಿ ಮಾಡತಕ್ಕದ್ದು,
ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದು ಪಡಿ/ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಮನವಿಗಳನ್ನು ತಿರಸ್ಕರಿಸಲಾಗುವುದು,
. ನಿಯಮಾನುಸಾರ ಆನ್ ಲೈನ್ ಅರ್ಜಿಯೊಂದಿಗೆ ಸಲ್ಲಿಸುವ ಲಗತ್ತುಗಳ ಆಧಾರದ ಮೇಲೆ ಮಾತ್ರವೇ ದಾಖಲೆಗಳ ಪರಿಶೀಲನೆ ಮಾಡಲಾಗುವುದರಿಂದ ವಯೋಮಿತಿ, ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಾಗೂ ಅರ್ಜಿಯಲಿ ಕೋರಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರ/ಇತರೆ ಪ್ರಮಾಣ ಪತ್ರಗಳನ್ನು ತಮ್ಮ ಹೆಸರಿನಲಿ...ಯೇ ಅರ್ಜಿ ಸಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಅಧಿಸೂಚನೆಯ ಅನುಬಂಧದಲ್ಲಿ ಸೂಚಿಸಿರುವ ನಮೂನೆಗಳಲ್ಲಿಯೇ ಕಡ್ಡಾಯವಾಗಿ ಪಡೆದಿಟ್ಟುಕೊಂಡು ಸದರಿ ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ಅಪ್‌ಲೋಡ್ ಮಾಡತಕ್ಕದು, (ದಾಖಲೆಗಳು ಸ್ಪಷ್ಟವಾಗಿರಬೇಕು) ತಪ್ಪಿದ್ದಲ್ಲಿ ಅವರ ಮೀಸಲಾತಿ/ಅಭ್ಯರ್ಥಿಕ್ಷ್ಯವನ್ನು ತಿರಸ್ಕರಿಸಲಾಗುವುದು.
ಅರ್ಜಿ ಸಲ್ಲಿಸುವ ಸಮಯದಲ್ಲಿ ಮೀಸಲಾತಿಯನ್ನು ಕೋರದೆ ತದನಂತರದಲ್ಲಿ ಮೀಸಲಾತಿಯನ್ನು ಪರಿಗಣಿಸುವಂತೆ ಕೋರಿ ಸಲಿ..ಸುವ ಮನವಿ/ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ.
3.1. ಅರ್ಜಿಗಳನ್ನು Online ಮೂಲಕವೇ ಭರ್ತಿ ಮಾಡಿ, ಭಾವಚಿತ್ರ/ಸಹಿ /ವಯೋಮಿತಿ/ ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪೊಡ್ ಮಾಡಿದ ನಂತರ ಶುಲ್ಕವನ್ನು ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ಮೂಲಕ ಸಂದಾಯ ಮಾಡಬಹುದಾಗಿರುತ್ತದೆ. ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು/ ಭಾವಚಿತ್ರ / ಸಹಿಯನ್ನು ಅಪ್ಲೋಡ್ ಮಾಡದೇ ಇರುವ /ಅಸ್ಪಷ್ಟ, ದಾಖಲೆಗಳನ್ನು ಅಪೊಡ್ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ವಿಶೇಷ ಸೂಚನೆ:-
ಈ ಹುದ್ದೆಗಳು ಗ್ರೂಪ್ 'ಸಿ' ಹುದ್ದೆಗಳಾಗಿರುವುದರಿಂದ ಆನ್‌ಲೈನ್ ಅರ್ಜಿಯೊಂದಿಗೆ ಸಲ್ಲಿಸುವ ಲಗತ್ತುಗಳ ಆಧಾರದ ಮೇಲೆ ಮಾತ್ರವೇ ದಾಖಲೆಗಳ ಪರಿಶೀಲನೆ ಮಾಡಲಾಗುವುದು. ಅವಶ್ಯಕ ಸಂದರ್ಭಗಳಲಿ ಆಯೋಗವು ಮೂಲ ದಾಖಲೆಗಳ ಪರಿಶೀಲನೆಯನ್ನು ನಡೆಸಲು ತೀರ್ಮಾನಿಸಿದ್ದಲ್ಲಿ ಈಗಾಗಲೇ ಆನ್‌ಲೈನ್ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಿರುವ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ತಪ್ಪದೇ ಹಾಜರುಪಡಿಸತಕ್ಕದ್ದು. ಏನೇ ಸಂದರ್ಭವಿದ್ದರೂ ವಯೋಮಿತಿ, ವಿದ್ಯಾರ್ಹತೆ ಮತ್ತು ಮೀಸಲಾತಿಗಳಿಗೆ ಸಂಬಂಧಿಸಿದಂತೆ ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಅಪ್‌ಲೋಡ್ ಮಾಡಲಾದ ಪ್ರಮಾಣ ಪತ್ರಗಳನ್ನೇ ಅಂತಿಮವೆಂದು ತೀರ್ಮಾನಿಸಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಜಾಗರೂಕತೆಯಿಂದ ತಮಗೆ ಅನ್ವಯಿಸುವ ಎಲ್ಲಾ ದಾಖಲೆಗಳನ್ನು ಸ್ಪಷ್ಟವಾಗಿ ಗೋಚರಿಸುವ ರೀತಿಯಲ್ಲಿ ಅಪ್ ಲೋಡ್ ಮಾಡತಕ್ಕದ್ದು.
4. ಅರ್ಜಿ ಸಲ್ಲಿಸುವ ಹಂತಗಳು- ಒಂದು ಬಾರಿಯ ನೋಂದಣಿ ಪ್ರಕ್ರಿಯೆ (OTR-ONE TIME REGISTRATION)
ಈ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಒಂದು ಬಾರಿಯ ನೋಂದಣಿ ಪ್ರಕ್ರಿಯೆಯನ್ನು ಒಳಗೊಂಡಿದ್ದು, (OTR-ONE TIME REGISTRATION) ಅಭ್ಯರ್ಥಿಗಳು ನೀಡಿರುವ ಮಾಹಿತಿಯನ್ನು ಮುಂದಿನ ಎಲ್ಲಾ ಅಧಿಸೂಚನೆಗಳಿಗೂ ಪರಿಗಣಿಸಲಾಗುವುದರಿಂದ, ಅಭ್ಯರ್ಥಿಗಳು Profile Creation/ರುಜುವಾತುಗಳು ಸೃಷ್ಟಿಸುವ ಹಂತದಲ್ಲಿ ಅತೀ ಜಾಗರೂಕತೆಯಿಂದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕಾಗಿದೆ. ಅಭ್ಯರ್ಥಿಗಳು ಸೂಚನೆಗಳನ್ನು ಹಂತಹಂತವಾಗಿ ಓದಿಕೊಳ್ಳತಕ್ಕದ್ದು ಎಲ್ಲಾ ಸೂಚನೆಗಳನ್ನು ಓದಿದ ನಂತರವೇ ಅರ್ಜಿಯನ್ನು ಭರ್ತಿಮಾಡತಕ್ಕದ್ದು
.1. ಅಭ್ಯರ್ಥಿಗಳು KPSC ವೆಬ್‌ಸೈಟ್ ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಇದರ ಹೊರತಾಗಿ ಯಾವುದೇ ಇತರ ಮೂಲಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
2. ಹೊಸದಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು, ಅರ್ಜಿದಾರರು KPSC 8.123 ^ 6 https://kpsconline.karnataka.gov.in ನೀಡಬೇಕು ಮತ್ತು ತಮ್ಮನ್ನು ನೋಂದಾಯಿಸಿಕೊಳ್ಳಲು New Registration "ಹೊಸ ನೋಂದಣಿ" ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
3. ನೋಂದಣಿ ಮತ್ತು ಲಾಗಿನ್ ರುಜುವಾತುಗಳನ್ನು ರಚಿಸಲು ನೀವು ಮಾನ್ಯವಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಿ.
4. ಒಮ್ಮೆ ನೀವು ನೋಂದಾಯಿಸಿದ ಮತ್ತು ನಿಮ್ಮ ಲಾಗಿನ್ ರುಜುವಾತುಗಳನ್ನು ಪಡೆದ ನಂತರ, ''ಅರ್ಜಿದಾರರ ವಿವರಗಳ ನೋಂದಣಿ" ಕ್ಲಿಕ್ ಮಾಡುವ ಮೂಲಕ ನಿಮ್ಮ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಲು ಮುಂದುವರಿಯಿರಿ,
5. ಅಭ್ಯರ್ಥಿಗಳು ತಮ್ಮ ವಿವರಗಳನ್ನು ಒಮ್ಮೆ ಮಾತ್ರ ಭರ್ತಿ ಮಾಡಬೇಕಾಗುತ್ತದೆ ಮತ್ತು ಈ ವಿವರಗಳನ್ನು ಎಲ್ಲಾ ಭವಿಷ್ಯದ KPSC ಅಧಿಸೂಚನೆಗಳಿಗೆ ಬಳಸಲಾಗುತ್ತದೆ. ಆದ್ದರಿಂದ ನಿಮ್ಮ USER ID ಮತ್ತು Password ಗಳನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳಿ. ನೀವು ನಿಮ್ಮ Loginನಲ್ಲಿ ಮಾತ್ರ ನಿಮ್ಮ ಮಾಹಿತಿಯನ್ನು ನವೀಕರಿಸಬಹುದು.
6. ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸುವ ಮೊದಲು ಎಲ್ಲಾ ವಿವರಗಳು ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಂಡು ಸಲ್ಲಿಸಲು ಸೂಚಿಸಿದೆ. ಸಲ್ಲಿಸಿದ ನಂತರ ವಿವರಗಳನ್ನು ತಪ್ಪಾಗಿ ಸಲ್ಲಿಸಿದ್ದು ಸರಿಪಡಿಸಿಕೊಡುವಂತೆ ಆಯೋಗಕ್ಕೆ ಪತ್ರ ವ್ಯವಹಾರ ಅಥವಾ E-Mail ಮೂಲಕ ಕಳುಹಿಸುವ ಕೋರಿಕೆಯನ್ನು ಪರಿಗಣಿಸಲಾಗುವುದಿಲ್ಲ.
ಸೂಚನೆ:
1. "ವೈಯಕ್ತಿಕ ವಿವರದಲ್ಲಿ." SSLC ಯನ್ನು 2002 ಅಥವಾ ಅದಕ್ಕಿಂತ ಹಿಂದೆ ಅಧ್ಯಯನ ಮಾಡಿದ ಅಭ್ಯರ್ಥಿಗಳು ವಿವರಗಳನ್ನು x_{i}*z_{i} [Manual Entry] ನಮೂದು ಮಾಡಬೇಕಾಗಿರುತ್ತದೆ. 2003 ಮತ್ತು ನಂತರದಲ್ಲಿ ಆಧ್ಯಯನ ಮಾಡಿದ ಅಭ್ಯರ್ಥಿಗಳು SSLC ನೋಂದಣಿ ಸಂಖ್ಯೆಯನ್ನು ನಮೂದಿಸಿದಲಿ. ವಿವರಗಳು ಸ್ವಯಂಚಾಲಿತವಾಗಿ ಅಧ್ಯಯನ ಮಾಡಿದ ಬೋರ್ಡಿನಿಂದ ನೇರವಾಗಿ ದಾಖಲಾಗುತ್ತದೆ.
2. "ವೈಯಕ್ತಿಕ ವಿವರದಲ್ಲಿ.." CBSE ಯನ್ನು 2003 ಅಥವಾ ಅದಕ್ಕಿಂತ ಹಿಂದೆ ಹಾಗೂ ICSE/ಇತರೆ ರಾಜ್ಯ ಸರ್ಕಾರದ 10ನೇ ತರಗತಿಯನ್ನು ಅಧ್ಯಯನ ಮಾಡಿದ ಅಭ್ಯರ್ಥಿಗಳು ವಿವರಗಳನ್ನು x, z [Manual Entry] ನಮೂದು ಮಾಡಬೇಕಾಗಿರುತ್ತದೆ. 2004 ಮತ್ತು ನಂತರದಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳು CBSE ನೋಂದಣಿ ಸಂಖ್ಯೆಯನ್ನು ನಮೂದಿಸಿದಲ್ಲಿ ವಿವರಗಳು ಸ್ವಯಂಚಾಲಿತವಾಗಿ ಅಧ್ಯಯನ ಮಾಡಿದ ಬೋರ್ಡಿನಿಂದ ನೇರವಾಗಿ ದಾಖಲಾಗುತ್ತದೆ.
3. "ವಿದ್ಯಾರ್ಹತೆಯ ವಿವರದಲ್ಲಿ.." PUC ತರಗತಿಯನ್ನು 2007 ಅಥವಾ ಅದಕ್ಕಿಂತ ಹಿಂದೆ ಅಭ್ಯಸಿಸಿದ್ದಲ್ಲಿ ಅಥವಾ ಯಾವುದೇ ಡಾಟಾ ಬಾರದೇ ಇದ್ದಲ್ಲಿ ಸ್ವತಃ ವಿವರಗಳನ್ನು ನಮೂದಿಸುವುದು
4. PUC ತರಗತಿಯನ್ನು 2008 ಮತ್ತು ನಂತರದಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳು PUC ನೋಂದಣಿ ಸಂಖ್ಯೆಯನ್ನು
ನಮೂದಿಸಿದಲ್ಲಿ ವಿವರಗಳು ಸ್ವಯಂಚಾಲಿತವಾಗಿ x_{c} ಅಧ್ಯಯನ ಮಾಡಿದ ಬೋರ್ಡಿನಿಂದ ನೇರವಾಗಿ ದಾಖಲಾಗುತ್ತದೆ,
5. "ಗುರುತಿನ ಪುರಾವೆ /ವಿವರದಲಿ.." Adhar / Kutumba ID /Ration Card ನ ಸಂಖ್ಯೆಗಳನ್ನು ನಮೂದಿಸಿದಲಿ. ನಿಮ್ಮ ಖಾಯಂ ವಿಳಾಸದ ಮಾಹಿತಿಯನ್ನು pi_{c} ಚಾಲಿತವಾಗಿ ಪಡೆಯಲಾಗುವುದು.
6. ನಿಮ್ಮ ಅರ್ಜಿದಾರರ ವಿವರ ಪುಟದಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಒದಗಿಸಿ ಮತ್ತು SAVE "ಉಳಿಸು" ಬಟನ್ ಅನ್ನು ಬಳಸಿಕೊಂಡು ಅದನ್ನು ಉಳಿಸಲು ಖಚಿತಪಡಿಸಿಕೊಳ್ಳಿ.
No comments:
Post a Comment